ರಾಮಚಂದ್ರ (ಹುಟ್ಟು:೧೯೮೩), ಅಮ್ಮ ರಾಮಚಂದ್ರ ಎಂದೇ ಗುರುತಿಸಲ್ಪಡುವ ಭಾರತೀಯ ಜನಪದ ಗಾಯಕ. ಜನಪದಗೀತೆಗಳು, ರಂಗಗೀತೆಗಳು ಮತ್ತು ಜಾಗೃತಿಗೀತೆಗಳ ಮೂಲಕ ನಾಡಿನಾದ್ಯಂತ ಪರಿಚಿತರಾಗಿರುವ ಇವರು, ಮೂಲತಃ ಮೈಸೂರಿನವರು. == ವೈಯಕ್ತಿಕ ಜೀವನ == ರಾಮಚಂದ್ರ, ಮೂಲತಃ ಹೆಚ್ ಡಿ ಕೋಟೆಯ ಸರಗೂರಿನ ದೇವಲಾಪುರ ಗ್ರಾಮದವರು. ತಂದೆ ಗೋಪಾಲಯ್ಯ, ತಾಯಿ ದೇವಮ್ಮ. ಮೂವರು ಸಹೋದರಿಯರಿದ್ದಾರೆ. == ಗಾಯಕರಾಗಿ == ಜನಪದ ಗೀತೆಗಳ ಹಾಡುವಿಕೆಗೆ ಹೆಸರಾದ ರಾಮಚಂದ್ರ ಅವರು ತಾಯಿಯ ಮೇಲಿನ ಪ್ರೇಮದಿಂದ ತಮ್ಮ ಹೆಸರಿನಲ್ಲಿ 'ಅಮ್ಮ' ಪದವನ್ನು ಸೇರಿಸಿರುವುದರಿಂದ ಅಮ್ಮ ರಾಮಚಂದ್ರ ಎಂದೇ ಪರಿಚಿತರಾಗಿದ್ದಾರೆ. == ಪ್ರಮುಖ ಪ್ರಶಸ್ತಿಗಳು == == ಉಲ್ಲೇಖನಗಳು ==